Kannada Summary: ಪ್ರಾಣಿಗಳ ಗುಂಪಿನ ಚಲನೆಯ ಅತಿ ಸರಳವಾದ ನಿಯಮ!

ಪ್ರಾಣಿಗಳ ಗುಂಪಿನ ಚಲನವಲನದ ರಹಸ್ಯವನ್ನು ತಿಳಿಯಲು ಕಂಪ್ಯೂಟರ್ ವಿಜ್ಞಾನ, ಭೌತ ವಿಜ್ಞಾನ ಹಾಗೂ ಗಣಿತದ ಸೂತ್ರಗಳ ಬಳಕೆ ಮಾಡಬಹುದು ಎಂದರೆ ಎಂಥಹಾ ರೋಚಕ ವಿಷಯವಲ್ಲವೇ! ಈ ತ್ರೆಡ್-ನಲ್ಲಿ ನಮ್ಮ ಪ್ರಯೋಗಾಲಯದಲ್ಲಿ ನಡೆದ ಸಂಶೋಧನೆಯನ್ನು ಕನ್ನಡದಲ್ಲಿ ನಿಮ್ಮೊಂದಿಗೆ ಹಂಚಿ ಕೊಳ್ಳುತ್ತೇವೆ.

[ಈ ಸಾರಾಂಶ ಟ್ವಿಟರ್ ನಲ್ಲಿಯೂ ಲಭ್ಯವಿದೆ.]

ಈ ವರ್ಷ ಮಾರ್ಚ್ ನಲ್ಲಿ,  “ಮೀನು ಗುಂಪಿಗಳ ಚಲನೆ” ಬಗೆಗಿನ ನಮ್ಮ ಸಂಶೋಧನೆಯು @NaturePhysics ಎನ್ನುವ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದರ ಕನ್ನಡದ ಸಾರಾಂಶವನ್ನು ಬರೆಯಲು ಅಂದು ಸಮಯವಾಗಿರಲಿಲ್ಲ. ಈಗ @Sci_Rio ಅವರ ಸಹಾಯದಿಂದ ಅನುವಾದ ಮಾಡಿದ್ದೇವೆ. ಓದಿ ನಿಮ್ಮ ಅನಿಸಿಕೆ ತಿಳಿಸಿ!

ಪಕ್ಷಿಗಳು, ಮೀನುಗಳು, ಜಿಂಕೆಗಳು — ಹೀಗೆ ಹಲವಾರು ಜೀವಿಗಳಲ್ಲಿ  —  ಗುಂಪಲ್ಲಿ ಚಲಿಸುವ ಆ‍‌‌‍ಕರ್ಷಕವಾದ ನೋಟವನ್ನು ನೀವೆಲ್ಲರೂ ನೋಡಿಯೇ ಇರುತ್ತೀರಿ.

ಗುಂಪಲ್ಲಿದ್ದರೂ ಸಹ, ಪ್ರತಿಯೊಂದು ಜೀವಿಗೂ ತನ್ನ ಸುತ್ತ ಮುತ್ತಲಿನ ಬಗ್ಗೆ ಸ್ವಲ್ಪ ಮಾತ್ರ ಅರಿವಿರುತ್ತದೆ. ಹಾಗಿದ್ದಲ್ಲಿ, ಅವು ಹೇಗೆ ಗುಂಪಿನಲ್ಲಿ ಅಷ್ಟು ಸರಾಗವಾಗಿ ಮನಸೆಳೆಯುವ ಚಲನವಲನಗಳನ್ನು ಪ್ರದರ್ಶಿಸುತ್ತವೆ?

ಗುಂಪಿನಲ್ಲಿ ಚಲಿಸುವ ಜೀವಿಗಳ ಚಲನವಲನಗಳನ್ನು ನೋಡಿದರೆ,  ಇವೇನು ಒಬ್ಬ ನಾಯಕನ ಆಜ್ಞೆಯನ್ನು ಪಾಲಿಸುತ್ತಾ ನಡೆಯುತ್ತಿವೆಯಾ? ನಮ್ಮ ಸ್ಕೌಟ್ಸ್-ಗಳಿಗೆ ಅಥವಾ ಕುಣಿತದವರಿಗೆ ಕೊಟ್ಟಂತೆ ಇವಕ್ಕೂ ಸಹ ಯಾರಾದರೂ ಕಟ್ಟುನಿಟ್ಟಾಗಿ ತರಬೇರಿ ನೀಡಿದ್ದಾರಾ? ನಮ್ಮ ಮನಸ್ಸಿಗೆ ಈ ರೀತಿ ಪ್ರಶ್ನೆಗಳು ಬರುವುದು ಸಹಜ.

ಈ ಪ್ರಶ್ನೆಗಳನ್ನು ಉತ್ತರಿಸಲು ಬರೀ ಜೀವಶಾಸ್ತ್ರದ ವಿಜ್ಞಾನಿಗಳಷ್ಟೇ ಅಲ್ಲ, ಭೌತಶಾಸ್ತ್ರಜ್ಞರು ಹಾಗೂ ಕಂಪ್ಯೂಟರ್ ವಿಜ್ಞಾನಿಗಳೂ ಹತ್ತಾರು ವರುಷಗಳಿಂದ ಪ್ರಯತ್ನ ಪಡುತ್ತಿದ್ದಾರೆ. ಸಾಕಷ್ಟು ಪ್ರಮಾಣದ ಮುನ್ನಡೆಯೂ ಆಗಿದೆ.

1987 ಲ್ಲಿ ಕ್ರೈಗ್ ರೇನಾಲ್ಡ್ಸ್ (Craig Reynolds) ಎನ್ನುವ ಕಂಪ್ಯೂಟರ್ ವಿಜ್ಞಾನಿ ಮತ್ತು 1995 ರಲ್ಲಿ ತಾಮಸ್ ವಿಚೆಕ್ (Tamas Vicsek) ಎನ್ನುವ ಭೌತ ಶಾಸ್ತ್ರಜ್ಞ ಮತ್ತು ಸಂಗಡಿಗರು,  ಕಂಪ್ಯೂಟರ್-ನಲ್ಲಿ ಪ್ರಾಣಿಗಳ ಗುಂಪಿನ ಚಲನೆಯನ್ನು ಅನುಕರಿಸಲು ಸಾಧ್ಯ ಎಂದು ತೋರಿಸಿಕೊಟ್ಟರು.

ಅವರು ಕಂಪ್ಯೂಟರ್-ನಲ್ಲಿ ಕೃತಕ ಜೀವಿಗಳನ್ನು ಕಲ್ಪಿಸಿಕೊಂಡು, ಒಂದು ಅತೀ ಸರಳವಾದ ‘ಸರಾಸರಿ ನಿಯಮ’ ವನ್ನು ಪ್ರತಿಪಾದಿಸಿದರು. ಇದರ ಪ್ರಕಾರ, ಪ್ರತಿಯೊಂದು ಜೀವಿಯೂ ಅದರ ಹತ್ತಿರದಲ್ಲಿರುವ ಅಥವಾ ಅಕ್ಕಪಕ್ಕದಲ್ಲಿರುವ ಪ್ರಾಣಿಗಳು ನಡೆಯುತ್ತಿರುವ ದಿಕ್ಕನ್ನು ಪರಿಗಣಿಸಿ, ಅವುಗಳ ಸರಾಸರಿ ದಿಕ್ಕಿನಲ್ಲಿ (average direction) ಚಲಿಸುತ್ತವೆ.

ಈ ಮೇಲೆ ತಿಳಿಸಿದ ಅತೀ ಸರಳವಾದ ‘ಸರಾಸರಿ ಚಲನೆಯ’ ನಿಯಮ ಒಂದು ಸಾಕು; ಪ್ರಾಣಿಗಳು ಅದ್ಭುತವಾದ ಸಾಮೂಹಿಕ ಚಲನವಲನವನ್ನು ಪ್ರದಶಿ೯ಸಲು ಸಾಧ್ಯ.  ನಾಯಕನ ಮಾರ್ಗದರ್ಶನವೂ ಬೇಡ. ಯಾವುದೇ ಕಟ್ಟುನಿಟ್ಟಾದ ತರಬೇತಿಯೂ ಬೇಡ.  ಈ ಸರಳವಾದ ನಿಯಮವು “ವಿಚೆಕ್ ನಿಯಮ ಅಥವಾ ವಿಚೆಕ್ ಮಾದರಿ” ಎಂದೇ ಪ್ರಸಿದ್ದಿ ಪಡೆದಿದೆ.

[This taken from Fig 1 of Vicsek et al 1995 PRL]

ಇದೇ ದೆಸೆಯಲ್ಲಿ ನಾವು ಸಹ ಸಂಶೋಧನೆ ನಡೆಸಿದೆವು.  ಕೇರಳದಲ್ಲಿ ದೊರಕುವ ಕರಿಮೀನು (Etroplus suratensis) ಎನ್ನುವ ಮೀನಿನ ಜಾತಿಯ ಸಾಮೂಹಿಕ ಚಲನವಲನಗಳ ರಹಸ್ಯವನ್ನು ಕಂಡುಹಿಡಿಯಲು ಮುನ್ನೆಡೆದೆವು.

ನಮ್ಮ ಶೋಧನೆಯ ಮೊದಲನೆಯ ಮುಖ್ಯ ಫಲಿತಾಂಶವೆಂದರೆ, ಒಂದು ಮೀನು ಅದರ ಪಕ್ಕ ಇರುವ ಕೇವಲ *ಒಂದು* ಮೀನಿನ ಚಲನೆಯ ದಿಕ್ಕನ್ನು ಮಾತ್ರ ಅನುಕರಣೆ ಮಾಡಿ ಈಜಾಡುತ್ತದೆ; ಇದಕ್ಕೆ ನಾವು pairwise copying ಎನ್ನುತ್ತೇವೆ.

ಪ್ರಸಿದ್ಧವಾಗಿರುವ ವಿಚೆಕ್ ಮಾದರಿ ಸರಿಯಾಗಿದ್ದಲ್ಲಿ, ಮೀನುಗಳು ತಮ್ಮ ಸುತ್ತಮುತ್ತಲಿರುವ ಅನೇಕ (ಸುಮಾರು ೫-೧೦) ಮೀನುಗಳ ಸರಾಸರಿ ದಿಕ್ಕಿನಲ್ಲಿ ಹೋಗಬೇಕಿತ್ತು; ಆದರೆ ಇದಕ್ಕಿಂತಲೂ ಸರಳವಾಗಿದೆ ನಾವು ಪತ್ತೆ ಮಾಡಿರುವ pairwise copying ನಿಯಮ.

ಈಗ ಬರೋಣ ನಮ್ಮ ಪರಿಶೋಧನೆಯ ಎರಡನೆಯ ಫಲಿತಾಂಶಕ್ಕೆ  – ಈ ಸಾಮೂಹಿಕ ಚಲನ ಮಾದರಿಯು non-equilibrium statistical physics ಎನ್ನುವ ಸಿಧಾಂತದ ಒಂದು ಅತೀ ಅಪರೂಪದ ಉದಾಹರಣೆ. ಅಥ೯ವಾಗಲಿಲ್ಲವೇ? ಇದರ ಬಗ್ಗೆ ಬನ್ನಿ ಮುಂದೆ ವಿವರವಾಗಿ ತಿಳಿಯೋಣ.

ಕರಿಮೀನು ದಕ್ಷಿಣ ಭಾರತದ ಪಶ್ಚಿಮ ಕರಾವಳಿಯಲ್ಲಿ ಸಹಜವಾಗಿ ಕಂಡು ಬರುವ ಹಾಗೂ ಮೀನು ತಿನ್ನುವವರಿಗೆ ಅತೀ ಪ್ರಿಯವಾದ ಮೀನು! ಆದರೆ ನಾವು ಇವನ್ನು ಪ್ರಯೋಗಾಲಯಕ್ಕೆ ತಂದು,  ಒಂದು ದೊಡ್ಡ ಟ್ಯಾಂಕ್/ತೊಟ್ಟಿಯಲ್ಲಿ ಸುಮಾರು ಮೀನುಗಳನ್ನು ಹಾಕಿದೆವು.

ಈ ಕೆಳಗಿನ ದೃಶ್ಯದಲ್ಲಿ ನಮ್ಮ ಸಂಶೋಧನೆಯ ತೊಟ್ಟಿ ಹಾಗೂ ಮೀನುಗಳ ಸಾಮೂಹಿಕ ಚಲನೆಯನ್ನು ನೋಡಬಹುದು. 15, 30, 60 ಮೀನುಗಳನ್ನು ಬೇರೆ ಬೇರೆ ತೊಟ್ಟಿಗಳಲ್ಲಿ ಬಿಟ್ಟು ನಾವು ವೀಡಿಯೋ ರೆಕಾರ್ಡಿಂಗ್ ಮಾಡಿದೆವು.

ಈ ವೀಡಿಯೋಗಳನ್ನು ವಿಷ್ಲೇಶಣೆ ಮಾಡಲು, ಕಂಪ್ಯೂಟರ್-ವಿಜ್ಞಾನದ image-processing ಎನ್ನುವ ಚಳಕವನ್ನು ಬಳಸಿ, ಪ್ರತಿಯೊಂದು ಮೀನಿನ ಚಲನೆಯನ್ನು ಗುರುತಿಸಿದೆವು. ಅವು ಹೇಗೆ ಅಕ್ಕಪಕ್ಕದ ಮೀನುಗಳ ಜೊತೆ ಸರಾಸರಿಯಾಗಿ ಈಜುತ್ತಿವೆ ಎಂದು ಪರಿಗಣಿಸಲು “Polarisation (M)” ಎಂಬ ಘಟಕವನ್ನು ಲೆಕ್ಕ ಹಾಕಿದೆವು.

Fig 1 of Jhawar et al 2020 Nature Physics.

ಈ ಘಟಕವು ಸಮಯ ಬದಲಾದಂತೆ ಹೇಗೆ ಬದಲಾವಣೆಯಾಗುತ್ತದೆ ಎಂದು ಒಂದು ರೇಖಾ ನಕ್ಷೆಯಲ್ಲಿ (graph) ದಾಖಲೆ ಮಾಡುತ್ತೇವೆ. ಈ ಲೆಕ್ಕಾಚಾರದಿಂದ ಒಂದು stochastic differential equation ಅನ್ನು ರಚಿಸುತ್ತೇವೆ.

ಇದೇ ನಮ್ಮ ಸಂಶೋಧನೆಯ ಬಹು ರೋಚಕ ಭಾಗ – ಹಲವಾರು ಸಂಶೋಧಕರು ಅಂದಾಜಿನಿಂದ ಊಹೆ ಮಾಡಿ ಗುಂಪಲ್ಲಿ ಚಲಿಸುವ ಪ್ರಾಣಿಗಳ ಸೂತ್ರಗಳನ್ನು ರಚಿಸಿದರೆ, ನಾವು ಅಂತಹ ಸೂತ್ರಗಳನ್ನು ನಿಖರವಾಗಿ ದಾಖಲಿಸಿದ “Polarisation” ಘಟಕದ ಲೆಕ್ಕಾಚಾರದಿಂದ ರಚಿಸಿದ್ದೇವೆ. ಈ ಮೇಲ್ಕಂಡ ಸೂತ್ರವನ್ನು ಸರಳವಾಗಿ ತಿಳಿಸಬೇಕಾದರೆ,…

(1) ಗುಂಪಲ್ಲಿ ಇರುವ ಎಲ್ಲಾ ಮೀನುಗಳು ಒಂದೇ ರೀತಿಯಲ್ಲಿ ಕ್ರಮಬದ್ಧವಾಗಿ ಚಲಿಸುತ್ತಿದ್ದರೆ, ಆ ಗುಂಪಿನ ಚಲನೆಯಲ್ಲಿ ಏರಿಳಿತಗಳು ಕಡಿಮೆ ಇರುತ್ತವೆ. ಅಂದರೆ, ಒಂದೆರಡು ಮೀನುಗಳ ಎಕ್ಕಸೆಕ್ಕ (random) ಚಲನೆಗಳು ಸಾಮೂಹಿಕ ಚಲನೆಯನ್ನು ಕದಡುವುದಿಲ್ಲ.

(2) ಎಲ್ಲಾ ಮೀನುಗಳು ಸಾಮೂಹಿಕವಾಗಿ ಚಲಿಸದೆ, ಅಸ್ತವ್ಯಸ್ತವಾಗಿ ಈಜಾಡುತ್ತಿದ್ದರೆ (disordered motion) – ಆಗ ಏರಿಳಿತಗಳು ಹೆಚ್ಚಾಗುತ್ತದೆ.

ಇನ್ನೊಂದು ರೀತಿ ಹೇಳುವುದಾದರೆ, ಮೀನುಗಳು ಗುಂಪಲ್ಲಿ ಒಗ್ಗೂಡಿಸಿ ಈಜಾಡದಿದ್ದರೆ, ಅವುಗಳ ಚಲನೆಯಲ್ಲಿ ಏರಿಳಿತಗಳು ಹೆಚ್ಚಾಗುತ್ತದೆ. ವಿಚಿತ್ರವೇನಂದರೆ, ಇಂತಹ ಏರಿಳಿತಗಳಿಂದಲೇ ಮೀನುಗಳು ಮತ್ತೆ ಕ್ರಮಭದ್ದವಾಗಿ ಈಜಾಟಕ್ಕೆ ಮಾರ್ಪಾಡುತ್ತವೆ. ಒಮ್ಮೆ ಕ್ರಮಬದ್ಧವಾಗಿ ಈಜಾಡಲು ಶುರುವಾಯಿತೆಂದರೆ, ಏರಿಳಿತಗಳು ಕಡಿಮೆಯಾಗುತ್ತವೆ.

ಈ ಕೆಳಗಿನ ದೃಶ್ಯವು, ಹೇಗೆ ಏರಿಳಿತಗಳು ಅಸ್ತವ್ಯಸ್ತವಾದ ಗುಂಪನ್ನು ಕ್ರಮಬದ್ಧತೆಯ ಕಡೆಗೆ ತೆಗೆದುಕೊಂಡು ಹೋಗುತ್ತದೆಯೆಂದು ಒಂದು ಕಂಪ್ಯೂಟರ್ ಸಿಮ್ಯುಲೇಶನ್ ಮೂಲಕ ತಿಳಿಸುತ್ತದೆ.

ಈ ಸಂಶೋಧನೆಯ ಪ್ರಾಮುಖ್ಯತೆ ಏನೆಂದು ಕೇಳುವಿರಾ? ಮೊದಲನೆಯದಾಗಿ — ಈ ರೋಚಕ ಹಾಗೂ ಕ್ಲಿಷ್ಟಕರ ಗುಂಪಿನ ಕ್ರಮಬದ್ಧ ನಡತೆಗೆ ಇರುವ ಅತೀ ಸರಳವಾದ ನಿಯಮದ ಸೂತ್ರಗಳನ್ನು ರೋಬಾಟ್ ತಯ್ಯಾರಿ ಮಾಡುವ ಅಥವಾ ಕಂಪ್ಯೂಟರ್ ಅನಿಮೇಶನ್ ಮಾಡುವ ಎಂಜಿನೀರ್-ಗಳು ಅಳವಡಿಸಿಕೊಳ್ಳಬಹುದು.

ಎರಡನೆಯದಾಗಿ, ಪ್ರಾಣಿಗಳ ನಡವಳಿಕೆಯುಲ್ಲಿ ಕ್ರಮಭದ್ರತೆಯ ಜೊತೆಗೆ ಎಕ್ಕಸೆಕ್ಕತನವೂ (randomness) ಉಂಟು. ಅದರ ರಹಸ್ಯವನ್ನು ಬಯಲು ಮಾಡಿದ ಮತ್ತು  ಭೌತ ಶಾಸ್ತ್ರದ ಸಿದ್ಧಾಂತಕ್ಕೆ ಹೊಂದಿಸಿದ ಮೊದಲ ಅಧ್ಯಯನ ಇದು.

ಕೊನೆಗೆ, ಪ್ರಾಣಿಗಳ ಗುಂಪಿನ ಚಲನವಲನದ ರಹಸ್ಯವನ್ನು ತಿಳಿಯಲು ಕಂಪ್ಯೂಟರ್ ವಿಜ್ಞಾನ, ಭೌತ ವಿಜ್ಞಾನ ಹಾಗೂ ಗಣಿತದ ಸೂತ್ರಗಳ ಬಳಕೆ ಮಾಡಬಹುದು ಎಂದರೆ ಎಂಥಹಾ ರೋಚಕ ವಿಷಯವಲ್ಲವೇ!  ಈ ಅಧ್ಯಯನ ಮಾಡಿದ ನಮಗೂ ಸಹ, ಈಗಲೂ ಅನಿಸತ್ತೆ, ನಿಜವಾಗಲೂ ಮೀನುಗಳು ಒಂದು ಗಣಿತದ ಸೂತ್ರವನ್ನು ಪಾಲಿಸತ್ತಾ ಅಂತ!

ಈ ಸಂಶೋಧನೆ @DBTIndia, @serbonline ಹಾಗೂ @IndiaDST ರವರ ಉದಾರ ಕಾಣಿಕೆ/ಸಹಾಯ/ಆಸರೆಯಿಂದ ಸಂಭವಿಸಿತು. ನಾ ಇದನ್ನು ಇಲ್ಲಿಗೆ ನಿಲ್ಲಿಸುತ್ತೇನೆ. ಇನ್ನು ವಿವರಗಳಿಗೆ ಸಂಶೋಧನೆಯ ಪ್ರಕಟಣೆನ್ನು ನೋಡಿ.

https://t.co/sAUdyAe4ON?amp=1



ಗುಂಪಲ್ಲಿ ಗೋವಿಂದ: Gumpalli Govinda – a Kannada talk on collective behaviour at Munnota

A couple of months ago, I gave a talk at Munnota Book store, where they organise some really good Kannada talks on science, social and political issues related to Kannada and Karnataka. Links to poster, videos of the talk (1.5 hours in all), etc are all given below. This was probably my first ever talk fully in Kannada on a science topic (of course, I was part of Thale Harate and Janasuddi podcasts recently, but this was a live talk to a larger audience). I really really enjoyed it. I hope to get more such opportunities.

ಸುಮಾರು ಎರಡು ತಿಂಗಳ ಹಿಂದೆ, ಮುನ್ನೋಟ ಬುಕ್ ಸ್ಟೋರ್ ಅವರು ನಡೆಸುವ ಮಾತುಕತೆ ಕಾರ್ಯಕ್ರಮದಲ್ಲಿ ನಾನು ಪ್ರಾಣಿಗಳಲ್ಲಿ ಗುಂಪಿನ ನಡವಳಿಕೆಯ ಬಗ್ಗೆ ಒಂದು ಕಾರ್ಯಕ್ರಮ ನಡೆಸಿದೆ. ಅದ ವೀಡಿಯೋ ಮತ್ತು ಪೋಷ್ಟರ್ ಗಳು ಇಲ್ಲಿವೆ.

ಇದರ ವಿಶೇಷವೇನೆಂದರೆ, ಇದು ನಾನು ಕನ್ನಡದಲ್ಲಿ  ಕೊಟ್ಟ ಮೊದಲ ವಿಜ್ಞಾನಕ್ಕೆ ಸಂಬಂಧ ಪಟ್ಟ ಭಾಷಣ. ಇಂತಹ ಅವಕಾಶ ಮಾಡಿಕೊಟ್ಟ ಮುನ್ನೋಟ ಅವರಿಗೆ ನನ್ನ ಧನ್ಯವಾದಗಳು.

Video – 1: 

 

Video – 2: 

 

Video – 3:

 

Poster for the talk: 

WhatsApp Image 2019-06-19 at 12.10.11 PM.jpeg


Thale-Harate’ podcast with Pavan Srinath and Ganesh Chakravarthi in Kananda (ಕನ್ನಡ)

Listen to my ‘Thale-Harate’ podcast with Pavan Srinath and Ganesh Chakravarthi in Kananda (ಕನ್ನಡ): 

https://ivmpodcasts.com/harate-kannada-podcast-episode-list/2019/5/8/ep-21-the-life-of-an-ecology-professor

On topics ecology, physics, some of my research work and on doing science in India.

I thoroughly enjoyed the conversation during recording, and I hope you too! Any feedback welcome.

Since its an hour and a half long, here is roughly how the topics of discussions go:

0 – 33 minutes: On ecology, how principles and methods of physics/mathematics can be useful. Includes examples from my own research work on ecosystem collapse and collective animal movement.

33 – 55 minutes: How does research actually happen? Did you have eureka-moments? What is the life of a processor and scientist like at work?

55 mins to 1:25 hrs: On Indian science and global competitiveness.


ಕೇಳಿ ನಮ್ಮ ಸಂಶೋಧನೆಯ ಬಗ್ಗೆ ಮತ್ತು ಪ್ರೊಫೆಸರ್/ವಿಜ್ಞಾನಿಯ ಜೀವನದ ಬಗ್ಗೆ : ತಲೆ-ಹರಟೆ podcast !!!

ಇತ್ತೇಚೆಗೆ ನಾನು ತಲೆ ಹರಟೆ ಪಾಡ್ಚಸ್ಟ್ ನಡೆಸುವ ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ಥಿ ಅವರ ಜೋತೆ, ಕನ್ನಡದಲ್ಲಿ ನಮ್ಮ ಸಂಶೋದನೆಯ ಬಗ್ಗೆ ದೀರ್ಘವಾದ ಮಾತುಕತೆ ನಡೆಸಿದೆ. ಆದನ್ನು ಇಲ್ಲಿ ಕೇಳಿ:

ಇದರಲ್ಲಿ ಅನೇಕ ವಿಷಯಗಳ ಬಗ್ಗೆ ಹರಟೆ ಹೊಡೆದಿದ್ದೇವೆ. ಸುಮಾರು ಒಂದೂ ವರೆ ಘಂಟೆ ಕಾಲ!!! ಇವುಗಳು ಸುಮಾರು ಈ ಗತಿಯಲ್ಲಿ ಮೂಡಿ ಬಂದಿವೆ:

1 – 33 mins:  ಏನಿದು ವಿಚಿತ್ರ, ಭೌತಶಾಸ್ತ್ರದ ತತ್ವಗಳು ಪರಿಸರ ವಿಜ್ಞಾನದಲ್ಲಿ ಹೇಗೆ ಬಳಕೆ? ಪರಿಸರ-ವ್ಯವಸ್ಥೆ-ಕುಸಿತ ಮತ್ತೆ  ಪ್ರಾಣಿ ಗುಂಪುಗುಳಿತನ – ಇವುಗಳ ಉದಾಹರಣೆ  ಮತ್ತೆ ಚರ್ಚೆ!

33 – 55 mins:  ಸಂಶೋಧನೆ ನಡೆಯುವ ಬಗೆ ಹೇಗಿರುತ್ತದೆ? ನಿಮಗೂ eureka-moment ಆಗಿದಿಯಾ?  ಪ್ರೊಫೆಸರ್ ಮತ್ತೆ ವಿಜ್ಞಾನಿ ಅವರ ಜೀವನ ಅಂದರೆ ಹೇಗಿರುತ್ತದೆ?

55 to 1:25 mins: ಭಾರತದ ವಿಜ್ಞಾನಿಗಳು ಜಾಗತಿಕಗವಾಗಿ ಅತ್ಯುತ್ತಮ ಸಂಶೋಧನೆ ಮಾಡಲು ಏನು ಮಾಡಬೇಕು?


ಜಾಣಸುದ್ದಿ-ಯಲ್ಲಿ ಒಂದು ಚಿಕ್ಕ ಮಾತುಕತೆ – ನಮ್ಮ ಸಂಶೋಧನೆ ಕನ್ನಡದಲ್ಲಿ!!

ನಮ್ಮ ಸಂಶೋಧನೆಯ ಬಗ್ಗೆ ಕನ್ನಡದಲ್ಲಿ ಸಂಕ್ಷಿಪ್ತವಾಗಿ ಕೇಳಿ – ಜಾಣಸುದ್ದಿಯ ಈ ವಾರದ ಸಂಚಿಕೆಯಲ್ಲಿ:

ಇದರಲ್ಲಿ ನಾನು ಪ್ರಾಣಿಗಳ ಗುಂಪುಗುಳಿತನದ (Collective behaviour) ಬಗ್ಗೆ ಮಾತಾಡಿದ್ದೇನೆ. ಕೊಲ್ಲೆಗಾಳ ಶರ್ಮಾ (CFTRI, Mysore) ಅವರ ಜೊತೆ ನನ್ನ  ಮಾತು ೧೩ ನಿಮಿಷದಿಂದ ಶುರುವಾಗುತ್ತದೆ. ಸುಮಾರು ಹತ್ತು ನಿಮಿಷ ಮಾತ್ರ!

ನಿಮಗೆ ಕನ್ನಡದಲ್ಲಿ ವಿಜ್ಞಾನದ ಬಗ್ಗೆ ತಿಳಿಯಲು ಆಸಕ್ತಿ ಇದ್ದರೆ, ಜಾಣಸುದ್ದಿ ತಪ್ಪದೇ ಕೇಳಿ! ಪ್ರತೀ ಭಾನುವಾರದ ದಿನ ಒಂದು ಸಂಚಿಕೆ ಬಿಡುಗಡೆ ಆಗುತ್ತದೆ. ಜಾಣಸುದ್ದಿಯ Whatsapp group-ge ಸೇರಲು, ಕೊಲ್ಲೆಗಾಳ ಶರ್ಮ ಅವರನ್ನು ಸಂಪರ್ಕಿಸಿ.


Hari Sridhar’s recent paper on Mixed-species flocks covered in Indian Express

Amitabh Sinha at Indian Express has a nice summary of Hari Sridhar’s recently published paper on “Friendship across species borders: factors that facilitate and constrain heterospecific sociality”.

Click here for the Indian Express article with the nice title: “Costs and benefits: Why birds of a feather sometimes don’t flock together”. This is how it looks in the newspaper!

Sridhar-Guttal-Indian_express-Coverage

Click here for the original research article.

 

 


(New) Paper on dryland ecosystem transitions and coverage in Deccan herald

Although I have tweeted quite a bit about this paper, I have been rather slow to announce this paper on this blog.

Chen Ning, Kailiang Yu, C Jayaprakash, Vishwesha Guttal, 2018, Rising variability, not slowing down, as a leading indicator of a stochastically driven abrupt transition in a dryland ecosystem, The American Naturalist, 191: E1 E14Data and Codes via Dryad. 

In this paper, we conduct an empirical test of early warning signals in a dryland ecosystem in China. This was based on a very cool email-collaboration with Chen Ning, a graduate student at that time.

The empirical analyses closely match with results of one of my PhD thesis paper with Prof C Jayaprakash, who is also a coauthor on this paper.

Suma from Gubbi Labs wrote this really nice popular article for Research Matters and it was also picked up by Deccan Herald, a very prominent English newspaper in South India !!!!

 


New paper on financial market crashes and media coverage

Our new paper showing “Lack of Critical Slowing Down Suggests that Financial Meltdowns Are Not Critical Transitions, yet Rising Variability Could Signal Systemic Risk” is out in PLoS ONE!

Nature India carried out a very nice article on our work, written by Mr Varma. National University of Ireland, Galway issued a press-release (an initial draft of which was written by Rajashree of Science Media Centre, IISc). and featured it on their website. Here is a media article at Deccan Herald, but whats written there just does not make sense.

This work was done in collaboration with Dr Srinivas Raghavendra, an economist at the National University of Ireland, Galway. We started the work sometime in mid-2012. Nikunj Goel, a Physics undergraduate student at IISc, joined this work in early 2014 and did enormous contributions to the manuscript. Quentin Hoarau, an undergraduate itern from CNS, France, was also a co-author on the manuscript.


Media coverage of our winter school modern finance and macroeconomics

Along with my collaborators Srikanth Iyer and Srinivas Raghavendra, I am organising an ICTS conference on “Modern finance and macroeconimics” from Dec 22nd and Jan 2nd.

We are delighted that our school got a coverage from Deccan Herald, an important newspaper in southern India. My colleague Srinivas Raghavendra and a student participating in the conference are quoted in the article.

In this school, I will be teaching techniques related to our collaborative work on testing predictions of early warning signals of critical transitions in financial markets. This work was done with Srinivas Raghavendra and my former UG students Nikunj Goel and Quentin Hoarau.

And Happy new year to all!